ರೀಲ್ಸ್ ರಾಣಿ, ಬಿಗ್‌ಬಾಸ್ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿಂದಾಸ್ ಪೋಸ್ಟ್‌ಗಳಿಂದ ಸದ್ದಿ ಮಾಡಿದ್ದ ಸೋನು ವಿವಾದಗಳಿಂದ ಕೂಡ ಸುದ್ದಿ ಆಗಿದ್ದರು.
ಸೋಶಿಯಲ್ ಮೀಡಿಯಾ ಕಂಟೆಂಟ್‌ಗಾಗಿ ಸೋನು ಮಾಡುವ ಸರ್ಕಸ್ ಒಂದೆರಡಲ್ಲ. ತಮ್ಮ ದೈನಂದಿನ ಜೀವನದ ವಿಚಾರಗಳನ್ನು ಯೂಟ್ಯೂಬ್ ವ್ಲಾಗ್ ವೀಡಿಯೋಗಳಲ್ಲಿ ಸೋನು ಹಂಚಿಕೊಳ್ಳುತ್ತಾರೆ. ನಾಲ್ಕು ದಿನಕ್ಕೊಂದು ವೀಡಿಯೋವನ್ನು ಯೂಟ್ಯೂಬ್ ಚಾನಲ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಪ್ರವಾಸಕ್ಕೆ ಹೋಗುವುದು, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವ ವೀಡಿಯೋಗಳನ್ನು ಸೋನು ಅಪ್‌ಲೋಡ್ ಮಾಡುತ್ತಾರೆ.