Current Date 25 Aug, 2026

ದರ್ಶನ್ ಬೆನ್ನು ಮೂಳೆ ಪ್ರಾಬ್ಲಂ ಇದೆ, ಲೇಟ್ ಆಗುತ್ತೆ, 'D58' ಬಗ್ಗೆ ಪ್ರೇಮ್ ಮಾತು

ನಟ ದರ್ಶನ್ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‌ ಸಿನಿಮಾ ಘೋಷಣೆ ಆಗಿರುವುದು ಗೊತ್ತೇಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ 'ಡೆವಿಲ್' ಸಿನಿಮಾ ಮುಗಿಸಿ ದರ್ಶನ್ ಮತ್ತೊಂದು ಚಿತ್ರಕ್ಕೆ ಸಿದ್ಧರಾಗಬೇಕಿತ್ತು.

ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜಾಮೀನು ಪಡೆದಿರುವುದು ಅವರನ್ನು ನಂಬಿಕೊಂಡ ನಿರ್ಮಾಪಕರಿಗೆ ಸಂತಸ ತಂದಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ದರ್ಶನ್ ಭಾಗಿ ಆಗುತ್ತಾರೆ ಎನ್ನುವ ಆಶಾಭಾವನೆ ಶುರುವಾಗಿದೆ. ಇತ್ತ ಜೋಗಿ ಪ್ರೇಮ್ 'KD' ಚಿತ್ರದಲ್ಲಿ ಮುಳುಗಿದ್ದಾರೆ.