Current Date 25 Aug, 2026

ವಾರೆವ್ಹಾ.. ಒಂದೇ ಚಿತ್ರದಲ್ಲಿ ರಿಷಬ್ ಶೆಟ್ಟಿ- ಪ್ರಭಾಸ್; ಕಥೆಯೇನು?

ಕನ್ನಡ ಸಿನಿಮಾ, ತೆಲುಗು ಸಿನಿಮಾ, ತಮಿಳು ಸಿನಿಮಾ ಅಲ್ಲ. ಈಗ ಏನಿದ್ದರೂ ಇಂಡಿಯನ್ ಸಿನಿಮಾ. ಹೌದು. ಸಣ್ಣ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರಲ್ಲ ಎಂದು ಸ್ಟಾರ್ ನಟರು, ಫಿಲ್ಮ್‌ ಮೇಕರ್ಸ್ ನಿರ್ಧರಿಸಿದ್ದಂತಿದೆ. ಈಗ ಬರೀ ಪ್ಯಾನ್ ಇಂಡಿಯಾ ಜಪ ಮಾಡುತ್ತಿದ್ದಾರೆ.

ದೊಡ್ಡ ದೊಡ್ಡ ಸ್ಟಾರ್‌ಗಳು ಒಟ್ಟಿಗೆ ಸೇರಿ ಸಿನಿಮಾ ಮಾಡುವುದು. 300, 400, 500 ಕೋಟಿ ರೂ. ಸುರಿಯುವುದು. ದೊಡ್ಡ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ರಿಲೀಸ್ ಮಾಡೋದು. 1000 ಕೋಟಿ ರೂ. ಕಲೆಕ್ಷನ್ ಮಾಡುವ ಟಾರ್ಗೆಟ್ ಇಟ್ಟುಕೊಳ್ಳುವುದು. ಸದ್ಯ ಚಿತ್ರರಂಗದಲ್ಲಿ ಇದೇ ಈಗ ಟ್ರೆಂಡ್ ಆಗಿದೆ.