Current Date 15 May, 2026

ದರ್ಶನ್ ಬರ್ತ್‌ಡೇ ದಿನ ನಡೆದ ಘಟನೆ ನೆನೆದು ಬಿದ್ದು ಬಿದ್ದು ನಕ್ಕಿದ್ದ ಕಿಚ್ಚ; ವೀಡಿಯೋ ವೈರಲ್

ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಬಳಿಕ ದೂರಾಗಿದ್ದು ಗೊತ್ತೇಯಿದೆ. ಅವರಬ್ಬರೂ ಮತ್ತೆ ಒಂದಾಗಬೇಕು ಎಂದು ಇವತ್ತಿಗೂ ಕಾಯುತ್ತಿರುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ದರ್ಶನ್ ಬಗ್ಗೆ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದ ಶಕ್ತಿಯೇ ಅಂಥಾದ್ದು. ಹಳೆಯದ್ದನೆಲ್ಲಾ ಮತ್ತೆ ಮತ್ತ ನೆನಪಿಸುತ್ತದೆ. ದರ್ಶನ್ ಹಾಗೂ ಸುದೀಪ್ ಸ್ನೇಹ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಆತ್ಮೀಯರಾಗಿದ್ದರು. ಹೆಚ್ಚು ಕಮ್ಮಿ ಒಂದೇ ಅವಧಿಯಲ್ಲಿ ಇಬ್ಬರೂ ಚಿತ್ರರಂಗಕ್ಕೆ ಬಂದಿದ್ದರು. ಒಟ್ಟೊಟ್ಟಿಗೆ ಗೆಲುವಿನ ಅಂಬಾರಿ ಏರಿದ್ದರು. ಹಾಗಾಗಿ ಬಹಳ ಬೇಗ ಉತ್ತಮ ಒಡನಾಟ ಬೆಳೆದಿತ್ತು. ಸಭೆ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಅಂಭಿ ಸಂಭ್ರಮ ಕಾರ್ಯಕ್ರಮದಲ್ಲಿ ಇಬ್ಬರೂ ಕುಚಿಕು-ಕುಚಿಕು ಹಾಡಿಗೆ ಎಜ್ಜೆ ಹಾಕಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಷ್ಣು-ಅಂಬಿ ಬಳಿಕ ದಚ್ಚು- ಕಿಚ್ಚ ಸ್ನೇಹ ಗಾಢವಾದದ್ದು ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ. ಆಗಾಗ್ಗೆ ಒಟ್ಟಿಗೆ ಸ್ನೇಹಿತರ ಜೊತೆ ಸುತ್ತಾಟ, ಪಾರ್ಟಿ ಅಂತೆಲ್ಲಾ ಎಂಜಾಯ್ ಮಾಡುತ್ತಿದ್ದರು. ಆದರೆ ದಿಢೀರನೆ ನಾನು, ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ ಎಂದು ಟ್ವೀಟ್ ಮಾಡಿ ದರ್ಶನ್ ಶಾಕ್ ಕೊಟ್ಟಿದ್ದರು.