Current Date 25 Aug, 2026

ನನಗೆ ನಿರ್ಮಾಪಕ ಅಪ್ಪನಂತಿದ್ದರೆ ನಿರ್ದೇಶಕ ಅಮ್ಮನಂತೆ- ಹಿರಿಯ ನಟಿ ತಾರಾ

ನನಗೆ ನಿರ್ಮಾಪಕ ಅಪ್ಪನಂತಿದ್ದರೆ ನಿರ್ದೇಶಕ ಅಮ್ಮನಂತೆ- ಹಿರಿಯ ನಟಿ ತಾರಾ

ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅಯೋಜಿಸಿದ್ದ, ಭಾರತೀಯ ಚಿತ್ರರಂಗದ ದಿಗ್ಗಜರಾದ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಹಿರಿಯನಟಿ ತಾರ ಅನುರಾಧ ಮಾತನಾಡಿ, ಇಲ್ಲಿ‌ ಕೆಟ್ಟ ನಿರ್ದೇಶಕರು, ಒಳ್ಳೆ ನಿರ್ದೇಶಕರು ಇಲ್ಲ. ಎಲ್ಲರೂ‌ ಒಂದಲ್ಲ ಒಂದು ರೀತಿಯಲ್ಲಿ ಪಾಠ ಹೇಳಿಕೊಟ್ಟವರೆ. ನನಗೆ ನಿರ್ಮಾಪಕ ಅಪ್ಪನಂತಿದ್ದರೆ, ನಿರ್ದೇಶಕ ನನಗೆ ಅಮ್ಮನಿದ್ದಂತೆ ಎಂದರು. ವಿಶ್ವನಾಥ್ ನೇತ್ರತ್ವದಲ್ಲಿ ನಿರ್ದೇಶಕರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ನಾನು ಎಂದಿಗೂ ಸಂಘದ ಜೊತೆ ಇದ್ದೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.