Current Date 15 May, 2026

ಹೈದರಾಬಾದ್‌ನಲ್ಲಿ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ; ಥಿಯೇಟರ್‌ನಲ್ಲಿ ನಡೆದಿದ್ದೇನು?

ತೆಲುಗಿನಲ್ಲಿ 'ಲವ್ ರೆಡ್ಡಿ' ಅನ್ನೋ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಹೀಗಾಗಿ ಚಿತ್ರತಂಡ ಹೈದರಾಬಾದ್‌ನ ಥಿಯೇಟರ್‌ವೊಂದಕ್ಕೆ ಭೇಟಿ ನೀಡಿತ್ತು. ಇವರೊಂದಿಗೆ ಕನ್ನಡದ ನಟ ಕೂಡ ಚಿತ್ರಮಂದಿರಕ್ಕೆ ಹೋಗಿದ್ದರು. ಈ ವೇಳೆ ಏಕಾಏಕಿ ಮಹಿಳೆಯೊಬ್ಬರು ಬಂದು ಥಳಿಸಿ, ಕಪಾಳಮೋಕ್ಷ ಮಾಡಿದ್ದಾರೆ. 'ಲವ್ ರೆಡ್ಡಿ' ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿತ್ತು. ಯುವ ಪ್ರತಿಭೆಗಳ ಈ ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಇದೊಂದು ಲವ್ ಕಮ್ ಎಮೋಷನಲ್ ಸ್ಟೋರಿ ಆಗಿರುವುದಿಂದ ತೆಲುಗು ಪ್ರೇಕ್ಷಕರು ಕೂಡ ಇಷ್ಟ ಪಟ್ಟಿದ್ದಾರೆ. ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ಥಿಯೇಟರ್‌ಗೆ ಹೋಗಿ ಪ್ರೇಕ್ಷಕರೊಂದಿಗೆ ಸಂಭ್ರಮಿಸುವುದು ಚಿತ್ರತಂಡದ ಆಲೋಚನೆಯಾಗಿತ್ತು. ಆದರೆ, ಮಹಿಳೆಯಿಂದ ಎಲ್ಲಾ ತಲೆ ಕೆಳಗಾಗಿದೆ.