Current Date 10 Jun, 2026

ಹೊಸ ಅತಿಥಿ ಸ್ವಾಗತಕ್ಕೆ ಅಂಬಿ ಕುಟುಂಬ ಸಿದ್ಧ; ಅವಿವಾ ಸೀಮಂತಕ್ಕೆ ತಯಾರಿ

ರೆಬಲ್ ಸ್ಟಾರ್ ಅಂಬರೀಶ್ ಕುಟುಂಬ ಸಂಭ್ರಮದಲ್ಲಿದೆ. ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸುವ ಸಮಯ ಹತ್ತಿರವಾಗುತ್ತಿದೆ. ಕಳೆದ ವರ್ಷ ಅದ್ಧೂರಿಯಾಗಿ ಹಸೆಮಣೆ ಏರಿದ್ದ ಅಭಿಷೇಕ್ ಅಂಬರೀಶ್ ಶೀಘ್ರದಲ್ಲೇ ತಂದೆ ಆಗುತ್ತಿದ್ದಾರೆ. ಅಭಿ ಪತ್ನಿ ಅವಿವಾ ಸೀಮಂತ ಶಾಸ್ತ್ರಕ್ಕೆ ಸಿದ್ಧತೆ ನಡೀತಿದೆ.

ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿ ಆಗಿದ್ದು ಕುಟುಂಬದಲ್ಲಿ ಸಂತಸ ತಂದಿದೆ. ಕಳೆದ ವರ್ಷ ಜೂನ್ 5ಕ್ಕೆ ಅಭಿ ಹಾಗೂ ಅವಿವಾ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಮಾರಂಭ ನೆರವೇರಿತ್ತು. ಬಳಿಕ ರಿಸೆಪ್ಷನ್ ಪಾರ್ಟಿ, ಸಂಗೀತ್ ಪಾರ್ಟಿ ಅಂತೆಲ್ಲಾ ಭಾರೀ ಸಂಭ್ರಮಾಚರಣೆ ನಡೆದಿತ್ತು. ಹಿರಿಯ ನಟಿ ಸುಮಲತಾ ಮಗನ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು