ಕಿರುತೆರೆ ನಟಿ ನೇಹಾ ಗೌಡ ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ನೇಹಾ- ಚಂದನ್ ಗೌಡ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮೂಲಕ ನೇಹಾ ಗೌಡ ಕಿರುತೆರೆ ಪ್ರವೇಶಿಸಿದ್ದರು. ಶ್ರುತಿ ಅಲಿಯಾಸ್ ಗೊಂಬೆ ಪಾತ್ರದಲ್ಲಿ ಮೋಡಿ ಮಾಡಿದ್ದರು. ವೀಕ್ಷಕರ ಮನಗೆದ್ದಿದ್ದರು. ನೇಹಾ ಗೌಡ ತಂದೆ ರಾಮಕೃಷ್ಣ ಕನ್ನಡ ಚಲನಚಿತ್ರರಂಗದ ಖ್ಯಾತ ಮೇಕಪ್ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ. ಸಹೋದರಿ ಸೋನು ಗೌಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕಂದಿನಿಂದ ಚಂದನ್ ಗೌಡ ಅವರನ್ನು ಪ್ರೀತಿಸಿ ನೇಹಾ ಮದುವೆ ಆಗಿದ್ದರು.