Current Date 15 May, 2026

ಭೈರತಿ ರಣಗಲ್' ಫಸ್ಟ್ ವೀಕೆಂಡ್ ಕಲೆಕ್ಷನ್ ಘೋಷಿಸಿದ ಚಿತ್ರಮಂದಿರ.. ಅಬ್ಬಬ್ಬಾ ಹೊಸ ಮೈಲಿಗಲ್ಲು

ನವೆಂಬರ್ 15ರಂದು 'ಭೈರತಿ ರಣಗಲ್' ಸಿನಿಮಾ ತೆರೆಗಪ್ಪಳಿಸಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕಮ್ಮಿ ಇದ್ದರೂ ಶುಕ್ರವಾರ ಮಧ್ಯಾಹ್ನದ ಬಳಿಕ ರಣಗಲ್ ಆರ್ಭಟ ಹೆಚ್ಚಾಯಿತು. ಬುಕ್‌ಮೈ ಶೋನಲ್ಲೇ ಸಾವಿರಾರು ಟಿಕೆಟ್‌ಗಳು ಬುಕ್ ಆಗ್ತಿದೆ. ಇನ್ನು ಚಿತ್ರಮಂದಿರಗಳಿಗೆ ಹೋಗಿ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿರುವವರ ಲೆಕ್ಕ ಹೇಳುವುದು ಬೇಡ.

ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಬಾಡೂಟ ಉಣಬಡಿಸುತ್ತಿದೆ. ರಣಗಲ್ ಆಗಿ ಶಿವಣ್ಣ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. 'ಮಫ್ತಿ' ಚಿತ್ರಕ್ಕೆ ಒಳ್ಳೆ ಪ್ರೀಕ್ವೆಲ್ ಎಂದು ಮೆಚ್ಚಿಕೊಂಡಿದ್ದಾರೆ. ಚಿತ್ರಮಂದಿರಗಳ ಅಂಗಳದಲ್ಲಿ ಸಂಭ್ರಮಾಚರಣೆ ಕೂಡ ಜೋರಾಗಿತ್ತು. ಫಸ್ಟ್ ವೀಕೆಂಡ್ ಹಲವೆಡೆ ಸಿನಿಮಾ ಹೌಸ್‌ಫುಲ್ ಆಗಿತ್ತು.