Current Date 09 May, 2026

ದರ್ಶನ್ ಹೇಳಿದ್ದಕ್ಕೆ ಕಿಡ್ನಾಪ್; ವಕೀಲರ ವಾದ.. ಪವಿತ್ರಾ ಗೌಡನಿಂದಲೇ ದರ್ಶನ್ ಮತ್ತೆ ಸಂಕಷ್ಟ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಕೋರ್ಟ್ ಸಲ್ಲಿಸಿದ್ದಾರೆ. ಇನ್ನೊಂದು ಕಡೆ ಅವರಿಗೆ ಸಹಜ ಜಾಮೀನು ಕೊಡಿಸುವುದಕ್ಕೆ ಶತ ಪ್ರಯತ್ನ ನಡೆಯುತ್ತಿದೆ. ಈ ಬೆನ್ನಲ್ಲೇ ಪವಿತ್ರ ಗೌಡ ಪರ ವಕೀಲರ ವಾದ ಮಂಡನೆ ದರ್ಶನ್‌ರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಪವಿತ್ರಾ ಗೌಡ ಪರ ವಕೀಲರು ಕೂಡ ಜಾಮೀನು ಕೊಡಿಸುವುದಕ್ಕೆ ಶತ ಪ್ರಯತ್ನ ನಡೆಯುತ್ತಲೇ ಇದೆ. ಹೈಕೋರ್ಟ್‌ನಲ್ಲಿ ಇವರ ಜಾಮೀನು ವಿಚಾರಣೆ ನಡೆಯುತ್ತಲೇ ಇದೆ. ಇನ್ನೂ ಜಾಮೀನು ಕೊಡಬೇಕಾ ಬೇಡ್ವಾ? ಅನ್ನುವ ನಿರ್ಧಾರಕ್ಕೆ ನ್ಯಾಯಾಧೀಶರು ಬಂದಿಲ್ಲ.