ಅದೆಷ್ಟೋ ಸಿನಿಮಾಗಳು ಸೆಟ್ಟೇರುವ ಮುನ್ನವೇ ನಿಂತು ಹೋಗುತ್ತವೆ. ಚಿತ್ರೀಕರಣ ಮುಗಿದು ಬಿಡುಗಡೆ ಆಗದೇ ಡಬ್ಬಾದಲ್ಲೇ ಉಳಿದಿರುವ ಚಿತ್ರಗಳ ಪಟ್ಟಿ ಕೂಡ ದೊಡ್ಡದಿದೆ. ಕೆಲವು ಸಿನಿಮಾಗಳು ಘೋಷಣೆ ಬಳಿಕ ಶುರುವಾಗುವುದೇ ಇಲ್ಲ. ದರ್ಶನ್ ನಟಿಸಬೇಕಿದ್ದ ಕೆಲ ಸಿನಿಮಾಗಳ ಕಥೆ ಕೂಡ ಹೀಗೆ ಆಗಿದೆ.
ದರ್ಶನ್ ಹೀರೊ ಆಗಿ ಒಂದಷ್ಟು ಸಿನಿಮಾಗಳು ಘೋಷಣೆ ಆಗಿ ಬಳಿಕ ಸೆಟ್ಟೇರಲಿಲ್ಲ. 'ರಾಜವೀರ ಮದಕರಿ ನಾಯಕ' ಸಿನಿಮಾ ಒಂದು ವಾರ ಚಿತ್ರೀಕರಣದ ನಂತರ ತಣ್ಣಗಾಗಿತ್ತು. ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. 15 ವರ್ಷಗಳ ಹಿಂದೆ 'ಕಪಾಲಿ' ಎಂಬ ಟೈಟಲ್‌ನಲ್ಲಿ ಚಿತ್ರವೊಂದು ಘೋಷಣೆ ಆಗಿತ್ತು. ಆದರೆ ಮುಂದೆ ಆ ಸಿನಿಮಾ ಶುರುವಾಗಲೇ ಇಲ್ಲ. ದರ್ಶನ್ ಕಾಂಬಿನೇಷನ್‌ನಲ್ಲಿ ನಿರ್ಮಾಪಕ ರಮೇಶ್ ಯಾದವ್ ಈ ಚಿತ್ರ ಮಾಡಬೇಕಿತ್ತು.