Current Date 25 Aug, 2026

ಡಾ.ರಾಜ್‌ಕುಮಾರ್ ಅಪಹರಣದ ಬಗ್ಗೆ ಅಂದಿನ ಸಿಎಂ ಎಸ್.ಎಂ.ಕೃಷ್ಣ ತಮ್ಮ 'ಆತ್ಮಕಥೆ'ಯಲ್ಲಿ ಹೇಳಿದ ಸತ್ಯವೇನು..?

ಕರುನಾಡಿನ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಇಂದು ಇಹಲೋಕ ತ್ಯಜಿಸಿದ್ದಾರೆ. 1999ರಿಂದ 2004ರವರೆಗೆ ನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್.ಎಂ.ಕೃಷ್ಣ2004ರಿಂದ 2008ರವರೆಗೆ ಮಹಾರಾಷ್ಟ್ರದ ಹತ್ತೊಂಬತ್ತನೇ ರಾಜ್ಯಪಾಲರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಆ ನಂತರ 2009ರಿಂದ 2012ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ.ಕೃಷ್ಣ 2017ರ ಮಾರ್ಚ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.ಬೆಂಗಳೂರು ಇಂದು ಐಟಿ ಬಿಟಿ ಸಿಟಿಯಾಗಿ ಬೆಳೆಯುವಲ್ಲಿ ಹೆಸರು ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಎಸ್.ಎಂ.ಕೃಷ್ಣ ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ ಕುಮಾರ್ ಅವರ ಅಪಹರಣವಾದಾಗ ನಿದ್ದೆ ಮಾಡುವುದನ್ನೇ ಮರೆತಿದ್ದರು. 108 ದಿನಗಳ ಕಾಲ ಒದ್ದಾಡಿದ್ದರು.