Current Date 15 May, 2026

ಬಘೀರ'ನೇ ಮೊದಲಲ್ಲ; ಇದಕ್ಕೂ ಮುನ್ನ ನೆಟ್‌ಫ್ಲಿಕ್ಸ್‌ಗೆ ಬಂದಿದ್ದ ಕನ್ನಡ ಚಿತ್ರಗಳ ಕಥೆ ಏನಾಯ್ತು?

ಶ್ರೀಮುರಳಿ ನಟನೆಯ ಸೂಪರ್ ಹಿಟ್ 'ಬಘೀರ' ಸಿನಿಮಾ ಓಟಿಟಿಯಲ್ಲಿ ಕೂಡ ಧೂಳೆಬ್ಬಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ 2ನೇ ಸ್ಥಾನದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಸಿನಿರಸಿಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ಗೆ ಬಂದ ಮೊದಲ ಕನ್ನಡ ಸಿನಿಮಾ 'ಬಘೀರ' ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಇದಕ್ಕೂ ಮುನ್ನ ಕೆಲ ಚಿತ್ರಗಳನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿತ್ತು.

ಮೊದಲಿನಿಂದಲೂ ನೆಟ್‌ಫ್ಲಿಕ್ಸ್ ಕನ್ನಡ ಚಿತ್ರಗಳ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳ ರೈಟ್ಸ್ ಕೊಂಡುಕೊಳ್ಳುತ್ತಿತ್ತು. ಆದರೆ ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ಹೊಂದಿತ್ತು. ಯಾರು ಕನ್ನಡ ಸಿನಿಮಾಗಳನ್ನು ನೋಡಲ್ಲ ಎನ್ನುವ ಕುಂಟು ನೆಪ ಹೇಳುತ್ತಿತ್ತು. ಒಳ್ಳೆ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಿದರೆ ಅಲ್ಲವೇ? ಕನ್ನಡಿಗರು ನೋಡಲು.