'ಮಫ್ತಿ' ತೆರೆಕಂಡ 7 ವರ್ಷಗಳ ಬಳಿಕ 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಿದೆ. ನಿರ್ದೇಶಕ ನರ್ತನ್ ಎರಡನೇ ಸಿನಿಮಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಬೆನ್ನಲ್ಲೇ ನರ್ತನ್ ಮುಂದಿನ ಸಿನಿಮಾ ಯಾವುದು? ಯಾರಿಗೆ ಸಿನಿಮಾ ಮಾಡುತ್ತಾರೆ ಅನ್ನುವ ಪ್ರಶ್ನೆಗಳು ಕೂಡ ಸಿನಿಪ್ರಿಯರಲ್ಲಿ ಹುಟ್ಟಿಕೊಂಡಿದೆ. ಇದೇ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಕೊಟ್ಟ ಪ್ರತಿಕ್ರಿಯೆ ಬೇರೆ ಲೆಕ್ಕಾಚಾರವನ್ನೇ ಹಾಕಿದೆ.
'ಭೈರತಿ ರಣಗಲ್' ಸಿನಿಮಾ ಬಳಿಕ ನಿರ್ದೇಶಕ ನರ್ತನ್‌ಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡದ ಮಾಸ್ ಹೀರೊಗಳು ನರ್ತನ್ ಜೊತೆ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ ಅನ್ನುವ ಮಾತು ಹರಿದಾಡುತ್ತಿದೆ. ಈಗಾಗಲೇ ಶಿವಣ್ಣ ಕೂಡ 'ಮಫ್ತಿ 2'ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಗ್ಯಾಪ್‌ನಲ್ಲಿ 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಎಂಟ್ರಿಯಾಗಿದೆ.