Current Date 15 May, 2026

ದರ್ಶನ್ ಬಿಡುಗಡೆ ಬೆನ್ನಲ್ಲೇ ಜೈಲಿಂದ ಹೊರ ಬಂದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ..!

ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಯಾರು ತಾನೇ ಹೇಗೆ ಮರೆಯಲು ಸಾಧ್ಯ. ದರ್ಶನ್ ವೃತ್ತಿ ಬದುಕಿನ ಪ್ರಮುಖ ಮೈಲಿಗಲ್ಲಿನಲ್ಲಿ ಈ ಚಿತ್ರ ಕೂಡ ಒಂದು. ರಾಯಣ್ಣನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ದರ್ಶನ್ ತಮ್ಮ ಅಭಿನಯದಿಂದ ಜನ ಮನಸೂರೆಗೊಂಡಿದ್ದರು.

ಇನ್ನೂ.. ಈ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಆ ಕಾಲಕ್ಕೆ ಹಣವನ್ನು ನೀರಿನಂತೆ ಖರ್ಚು ಮಾಡಿದ್ದರು. ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆಯನ್ನು ಮಾಡಿದ್ದರು. ಆದರೆ, ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ಮಾಣ ಮಾಡಿದ ಆನಂದ್ ಅಪ್ಪುಗೋಳ್ ಆ ನಂತರ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡರು.