Current Date 15 May, 2026

ಯಶ್ ಉದ್ದ ಕೂದಲು, ಗಡ್ಡಕ್ಕೆ ಕತ್ತರಿ ಹಾಕಿದ ವ್ಯಕ್ತಿ 'ಟಾಕ್ಸಿಕ್' ಕಥೆ ಬಗ್ಗೆ ಏನಂದ್ರು?


ರಾಕಿಂಗ್ ಸ್ಟಾರ್ ಯಶ್ ಹೊಸ ಹೇರ್‌ಸ್ಟೈಲ್ ಸಖತ್ ವೈರಲ್ ಆಗುತ್ತಿದೆ. ಮುಖೇಶ್ ಅಂಬಾನಿ ಮಗನ ಮದುವೆಗೆ ವಿಭಿನ್ನ ಲುಕ್‌ನಲ್ಲಿ ರಾಕಿಭಾಯ್ ಎಂಟ್ರಿ ಕೊಟ್ಟಿದ್ದರು. ಅರೇ ಉದ್ದ ಕೂದಲು, ಗಡ್ಡ ಟ್ರಿಮ್ ಆಗಿದ್ಯಲ್ಲ, ಹೊಸ ಲುಕ್ ಸೂಪರ್ ಎಂದು ಫೋಟೊಗಳನ್ನು ವೈರಲ್ ಮಾಡಿದ್ದರು.

'ಟಾಕ್ಸಿಕ್' ಚಿತ್ರದಲ್ಲಿ ಯಶ್ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಹೊಸ ಹೇರ್‌ಸ್ಟೈಲ್ ಹಿಂದಿನ ರೂವಾರಿ ಯಾರು ಎನ್ನುವುದು ಇದೀಗ ರಿವೀಲ್ ಆಗಿದೆ. ಖ್ಯಾತ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಈ ಬಾರಿ ಯಶ್ ಕೂದಲಿಗೆ ಕತ್ತರಿ ಹಾಕಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.