ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಗಳದ್ದು ಒಂದೊಂದು ಹಿನ್ನೆಲೆಯಿದೆ. ಸಿನಿಮಾ, ಕಿರಿತೆರೆ, ಹೋರಾಟ ಹೀಗೆ ಒಂದೊಂದು ಕ್ಷೇತ್ರದಿಂದ ಒಬ್ಬೊಬ್ಬರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ಫೈರ್ ಬ್ರ್ಯಾಂಡ್ ಅಂತಲೇ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿ ಚೈತ್ರಾ ಕುಂದಾಪುರ. ಗಟ್ಟಿ ಧ್ವನಿಯ ಚೈತ್ರಾ ಕುಂದಾಪುರ ಮನೆಯೊಳಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನ ಚೈತ್ರಾ ಕುಂದಾಪುರ ಹೆಸರು ಜನಪ್ರಿಯರವಾಗಿತ್ತು. ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಎಂದೇ ಚೈತ್ರಾ ಕುಂದಾಪುರ ಜನಪ್ರಿಯತೆ ಪಡೆದುಕೊಂಡಿದ್ದರು. ವೇದಿಕೆ ಮೇಲೆ ನಿರ್ಭಯವಾಗಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ ಅವರಿಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಈಗ ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡುತ್ತಿದ್ದಾರೆ.