Current Date 15 May, 2026

'ಭೈರತಿ ರಣಗಲ್' ಹತ್ತು ದಿನಗಳಲ್ಲಿ ಗಳಿಸಿದ್ದೆಷ್ಟು? ಶಿವಣ್ಣ-ನರ್ತನ್ ಕಾಂಬಿನೇಷನ್ ಹಿಟ್ ಆಯ್ತಾ? ಫ್ಲಾಪ್ ಆಯ್ತಾ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ಭೈರತಿ ರಣಗಲ್‌' ಸ್ಯಾಂಡಲ್‌ವುಡ್‌ಗೆ ಪಾಸಿಟಿವ್ ಎನರ್ಜಿ ಕೊಟ್ಟಿತ್ತು. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್‌ಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. 'ಮಫ್ತಿ' ಬಳಿಕ ಶಿವಣ್ಣನನ್ನು ಮತ್ತೆ ಅದೇ ಗೆಟಪ್‌ನಲ್ಲಿ ನೋಡಿ ದೊಡ್ಮನೆ ಅಭಿಮಾನಿಗಳಂತೂ ಥ್ರಿಲ್ ಆಗಿದ್ದರು. ನವೆಂಬರ್ 15ರಂದು ತೆರೆಕಂಡಿದ್ದ ಈ ಸಿನಿಮಾಗೆ ಉತ್ತಮ ಮೌತ್‌ ಪಬ್ಲಿಸಿಟಿಯಂತೂ ಸಿಕ್ಕಿತ್ತು.

ಮೊದಲ ನಾಲ್ಕು ದಿನ 'ಭೈರತಿ ರಣಗಲ್' ಕಲೆಕ್ಷನ್ ಸೂಪರ್‌ ಆಗಿತ್ತು. ಬಳಿಕ ವೀಕ್‌ ಡೇಸ್‌ನಲ್ಲಿ ಸಿನಿಮಾದ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಆದ್ರೀಗ ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಸಖತ್ ಆಗಿಯೇ ಇದೆ. ಇತ್ತ ಅನಾರೋಗ್ಯದ ಹಿನ್ನೆಲೆಯಲ್ಲೂ ಸಿನಿಮಾದ ಪ್ರಚಾರದಲ್ಲಿ ಖುದ್ದಾಗಿ ಶಿವರಾಜ್‌ಕುಮಾರ್ ಥಿಯೇಟರ್ ವಿಸಿಟ್ ಹಾಕುತ್ತಿದ್ದಾರೆ.