Current Date 15 May, 2026

ದೊರೆ ಅಂತ ಟೈಟಲ್ ಇಡುವುದಕ್ಕೆ ಇಷ್ಟ ಆಗಿರಲಿಲ್ಲ"; ಶಿವಮೊಗ್ಗದಲ್ಲಿ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಹೇಳಿಕೆ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ವೃತ್ತಿ ಬದುಕಿನಲ್ಲಿ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೂವರೆಗೂ ನಟಿಸಿದ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ. ಶಿವಣ್ಣ ಲುಕ್‌ಗೆ, ಮ್ಯಾನರಿಸಂಗೆ ಕಳೆದು ಹೋಗದವರೇ ಇಲ್ಲ. 63ನೇ ವಯಸ್ಸಿನಲ್ಲೂ ಶಿವಣ್ಣನ ಎನರ್ಜಿಯನ್ನು ಸರಿದೂಗಿಸುವುದಕ್ಕೆ ಯುವ ನಾಯಕ ನಟರು ಕಷ್ಟ ಪಡುತ್ತಾರೆ. ಇನ್ನು ಶಿವಣ್ಣ ಸಿನಿಮಾ, ಮ್ಯಾನರಿಸಂ ಎಷ್ಟು ಅಟ್ರ್ಯಾಕ್ಟಿವ್ ಆಗಿರುತ್ತೋ? ಅಷ್ಟೇ ಅವರ ಸಿನಿಮಾದ ಟೈಟಲ್‌ಗಳು ಕೂಡ ಅಷ್ಟೇ ಪವರ್‌ಫುಲ್ ಆಗಿರುತ್ತೆ. ಇತ್ತೀಚೆಗೆ ಶಿವರಾಜ್‌ಕುಮಾರ್ ಶಿವಮೊಗ್ಗದ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸಿನಿಮಾಗಳ ಟೈಟಲ್ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ಹಾಗೇ ಕಾದಂಬರಿಯನ್ನು ಆಧರಿಸಿದ ಸಿನಿಮಾಗಳಲ್ಲಿ ನಟಿಸಿದ್ದರ ಬಗ್ಗೆನೂ ಮಾತಾಡಿದ್ದಾರೆ.