Current Date 15 Oct, 2026

ಶೋಭಿತಾ ಶಿವಣ್ಣ ನಿಧನಕ್ಕೆ ಸಾಂಸಾರಿಕ ಸಮಸ್ಯೆ ಕಾರಣನಾ?ಆಕೆ ನಟಿ ಅನ್ನುವುದೇ ಗೊತ್ತಿರಲಿಲ್ಲ ಎಂದ ಮಾವ ಬುಚ್ಚಿ ರೆಡ್ಡಿ...!

ಬದುಕಿ ಬಾಳಬೇಕಿದ್ದ ಬ್ರಹ್ಮಗಂಟು ಧಾರಾವಾಹಿಯ ಶೋಭಿತಾ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಅನೇಕರು ಶೋಭಿತಾ ಅವರ ಪತಿ ಸುಧೀರ್ ರೆಡ್ಡಿ ಅವರ ಕಡೆ ಅನುಮಾನದ ದೃಷ್ಟಿಯಿಂದ ನೋಡಲು ಶುರು ಮಾಡಿದ್ದರು. ಗಂಡ-ಹೆಂಡತಿ ನಡುವೆ ಮನಸ್ತಾಪ ಇದ್ದ ಹಿನ್ನೆಲೆ ಶೋಭಿತಾ ದುಡಕಿರಬಹುದು ಎಂದು ಮಾತನಾಡಿಕೊಂಡರು. ಆದರೆ, ಪೊಲೀಸರಿಗೆ ಶೋಭಿತಾ ರೂಮ್‌ನಲ್ಲಿ ಸಿಕ್ಕ ಡೆತ್ ನೋಟ್ ಶೋಭಿತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತುಗಳಿಗೆ ಪುಷ್ಠಿಯನ್ನು ನೀಡಿತು. ಈಗ ಶೋಭಿತಾ ಅವರ ಮಾವ ಬುಚ್ಚಿ ರೆಡ್ಡಿ ಮಾತನಾಡಿದ್ದಾರೆ.ತಮ್ಮ ಮನದ ನೋವನ್ನು ಹಂಚಿಕೊಂಡಿದ್ಧಾರೆ.

ಹೈದ್ರಾಬಾದ್‌ನ ಮಾಧ್ಯಮಗಳಿಗೆ ಶೋಭಿತಾ ನಿಧನದ ಕುರಿತು ಮಾತನಾಡಿರುವ ಬುಚ್ಚಿ ರೆಡ್ಡಿ ಆಕೆಯನ್ನು ನಾವು ಮಗು ತರ ನೋಡಿಕೊಂಡಿದ್ದೇವು ಎಂದಿದ್ದಾರೆ. ನಮ್ಮ ಜೊತೆ ನಗು ನಗುತ್ತಾ ಆತ್ಮೀಯವಾಗಿ ಶೋಭಿತಾ ಬೆರೆಯುತ್ತಿದ್ದಳು ಎಂದಿರುವ ಮಾವ ಬುಚ್ಚಿ ರೆಡ್ಡಿ ಮದ್ವೆಯಾಗುವವರೆಗೆ ಆಕೆ ಕಿರುತೆರೆ ನಟಿ ಅನ್ನೋದೇ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.