Current Date 26 Aug, 2026

ಈ ಬಾರಿ ಸಿಂಪಲ್ ಆಗಿಲ್ಲ ಸುನಿ ಸಿನಿಮಾ: ಪರದೆ ಮೇಲೆ ರಕ್ತ ಚರಿತ್ರೆ ಬರೆಯಲು 'ದೇವರು ರುಜು ಮಾಡಿದನು'

ಸಿಂಪಲ್ ಸುನಿ ಸಿನಿಮಾಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಅವರು ಇಡುವ ಟೈಟಲ್‌ಗಳು ಗಮನ ಸೆಳೆಯುತ್ತವೆ. ಅವರು ನಿರ್ದೇಶನ ಮಾಡುವ ಪ್ರತಿ ಸಿನಿಮಾದ ಮೊದಲು ಗಮನ ಸೆಳೆಯುವುದು ಟೈಟಲ್‌ನಿಂದಲೇ. ಈಗ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಆ ಸಿನಿಮಾದ ಟೈಟಲ್ ಕೂಡ ಅಷ್ಟೇ ಕ್ಯಾಚಿಯಾಗಿದೆ. ಅದುವೇ 'ದೇವರು ರುಜು ಮಾಡಿದನು' ಸಿಂಪಲ್ ಸುನಿ ಸಿನಿಮಾಗಳಲ್ಲಿ ಟೈಟಲ್‌ಗಳೇ ಕಿಕ್ ಕೊಡುತ್ತವೆ. ಕೆಲವೊಮ್ಮೆ ಅಪ್ಪ ಕನ್ನಡದ ಟೈಟಲ್ ಇಟ್ಟು ಹೀಗೂ ಇಡಬಹುದಲ್ಲಾ? ಅಂತ ಪ್ರಶ್ನೆ ಮೂಡಿಸುತ್ತಾರೆ. ಅದೇ ಇನ್ನೊಂದು ಕಡೆ 'ಚಮಕ್', 'ಸಖತ್', 'ಬಹುಪರಾಕ್' ಅಂತ ಒಂದೇ ಪದದಲ್ಲಿ ಟೈಟಲ್ ಕೊಟ್ಟು ಮುಗಿಸಿದ್ದೂ ಇದೆ. ಆದರೆ, ಈ ಬಾರಿ ಹಾಗಲ್ಲ. 'ದೇವರು ರುಜು ಮಾಡಿದನು' ಅಂತ ಇಷ್ಟುದ್ದ ಟೈಟಲ್ ಇಟ್ಟಿದ್ದಾರೆ.