Current Date 10 Jun, 2026

ನವ ದಂಪತಿಗಳ ಸ್ವರ್ಗ ಮಾಲ್ಡೀವ್ಸ್‌ನಲ್ಲಿ ತರುಣ್-ಸೋನಾಲ್; ಕೈ ಕೈ ಹಿಡಿದು ಸುತ್ತಾಡಿದ ಜೋಡಿ

'ಕಾಟೇರ' ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೇರೊ ವೈವಾಹಿಕವನ್ನು ಎಂಜಾಯ್ ಮಾಡುತ್ತಿದ್ದಾರೆ. ಹಿಂದೂ ಸಂಪ್ರದಾಯ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಎರಡೆರಡು ಬಾರಿ ವಿವಾಹವಾಗಿದ್ದ ಈ ಜೋಡಿ ಒಂದಷ್ಟು ದಿನ ಸೈಲೆಂಟ್ ಆಗಿತ್ತು. ಆದರೆ, ಅವರ ಅಭಿಮಾನಿಗಳಿಗೆ ಮಾತ್ರ ಇನ್ನೂ ಈ ಜೋಡಿ ಹನಿಮೂನ್‌ಗೆ ಹೋಗಿಲ್ವಲ್ಲ ಅಂತ ಕೇಳುತ್ತಲೇ ಇತ್ತು. ತರುಣ್ ಸುಧೀರ್, ಸೋನಾಲ್ ಮಾಂತೇರೊ ಇಬ್ಬರೂ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಇನ್ನೇನು ಮದುವೆ ಆಗಬೇಕು ಅಂತ ನಿರ್ಧರಿಸಿದಾಗಲೇ ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ್ದರು. ಈ ಲವ್ ಸ್ಟೋರಿ ಮೊದಲು ಅವರ ನೆಚ್ಚಿನ ನಟ ದರ್ಶನ್‌ಗೂ ಗೊತ್ತಿತ್ತು.