ದರ್ಶನ್ ಕನಸು 'ವೀರ ಮದಕರಿ ನಾಯಕ' ಇನ್ನು ಈಡೇರುವುದು ಕಷ್ಟ? ಈ ಐತಿಹಾಸಿಕ ಸಿನಿಮಾವನ್ನು ಮರೆತು ಬಿಡಬೇಕಾ?
ರೇಣುಕಾಸ್ವಾಮಿ ಮರ್ಡರ್ ಕೇಸ್ ದರ್ಶನ್ ವೃತ್ತಿ ಬದುಕಿಗೆ ದೊಡ್ಡ ಪೆಟ್ಟು ಕೊಡಬಹುದು. ಕನ್ನಡ ಚಿತ್ರರಂಗದ ನಿರ್ಮಾಪಕ ಕೆ. ಮಂಜು ಲೆಕ್ಕಾಚಾರ ಏನೇ ಇದ್ದರೂ, ದರ್ಶನ್ ಸಿನಿಮಾ ಬದುಕಿಗೆ ಇದೊಂದು ಕಪ್ಪು ಚುಕ್ಕು ಆಗಿರುವುದಂತೂ ನಿಜ. ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಸದ್ಯಕ್ಕಂತೂ ಹೊರಬರುವುದು ಅನುಮಾನ. ಇಂತಹ ಸಂದರ್ಭದಲ್ಲಿ 'ವೀರ ಮದಕರಿ' ಸಿನಿಮಾ ಸದ್ದು ಮಾಡುತ್ತಿದೆ.
'ವೀರ ಮದಕರಿ' ದರ್ಶನ್ ಬಹಳ ಹಿಂದೆನೇ ನಟಿಸಬೇಕಿದ್ದ ಸಿನಿಮಾ. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣಕ್ಕೂ ಮುಂದಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಒಂದಿಷ್ಟು ಈ ಸಿನಿಮಾದ ಶೂಟಿಂಗ್ ಕೂಡ ಮಾಡಲಾಗಿತ್ತು. ಆದರೂ, ಮಧ್ಯದಲ್ಲಿಯೇ ನಿಲ್ಲಿಸಬೇಕಾಗಿ ಬಂದಿತ್ತು.