Current Date 25 Aug, 2026

ಮಾಧವನ್ ಜೊತೆ ಮೇಘಾ ಶೆಟ್ಟಿ ಸೆಲ್ಫಿ ; ಪರಭಾಷೆ ಪಾಲಾಗ್ತಾರಾ ಅನು ಸಿರಿಮನೆ..?

ಬಾಲಿವುಡ್ ನಟ ಆರ್ ಮಾಧವನ್ ತಮ್ಮ ಸಿನಿಮಾಗಳ ಮೂಲಕ ಸೌತ್ ನಲ್ಲೂ ಫೇಮಸ್ ಆಗಿದ್ದಾರೆ. ಹಿಂದಿ ಹಾಗೂ ತಮಿಳಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಆರ್ ಮಾಧವನ್ ಜೊತೆ ಕನ್ನಡದ ನಟಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 
 ನಟಿ ಮೇಘಾ ಶೆಟ್ಟಿ, ನಟ ಮಾಧವನ್ ಜೊತೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಅಸಾಧಾರಣ ನಟನೊಂದಿಗೆ ಮಾತನಾಡಲು ಸಮಯ ಕಳೆಯಲು ಅವಕಾಶ ಸಿಕ್ಕಿತು. ನಿಜವಾಗಿಯೂ ಉತ್ತಮ ಕಲಿಕೆಯ ಅನುಭವವಾಗಿದೆ ಎಂದು ನಟಿ ಮೇಘಾ ಶೆಟ್ಟಿ ಬರೆದಿದ್ದಾರೆ.