ಮಹಿಳಾ ಸ್ಪರ್ಧಿಗಳನ್ನು ನರಕದಲ್ಲಿ ಇಟ್ಟಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈಗ ನರಕವನ್ನು ತೆಗೆದುಹಾಕಲಾಗಿದೆ. ಆದರೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಮೇಲೆ ಕೇಳಿಬಂದ ಆರೋಪಕ್ಕೆ ಮಹಿಳಾ ಸ್ಪರ್ಧಿಗಳಿಂದಲೇ ಸುದೀಪ್ ಅವರು ಸ್ಪಷ್ಟನೆ ಕೊಡಿಸಿದ್ದಾರೆ.