Current Date 26 Aug, 2026

ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ

ಹೆಣ್ಮಕ್ಕಳಿಗೆ ಗೌರವ ಕೊಡಬೇಕು ಎಂದು ಭಾಷಣ ಹೊಡೆಯುವ ಚೈತ್ರಾ ಕುಂದಾಪುರ ಅವರು ಮಾತಿನ ಭರದಲ್ಲಿ ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಹೇಳಿದ್ದನ್ನು ಸುದೀಪ್ ಟೀಕಿಸಿದ್ದಾರೆ. ಅದಕ್ಕಾಗಿ ಚೈತ್ರಾ ಕ್ಷಮೆ ಕೇಳಿದರೂ ಕೂಡ ನಂತರ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುವುದನ್ನು ಮುಂದುವರಿಸಿದರು. ಆ ಮೂಲಕ ಉದ್ಧಟತನ ತೋರಿಸಿದ್ದಾರೆ.ಕಳೆದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಅನೇಕರಿಗೆ ಕ್ಲಾಸ್ ತೆಗೆದುಕೊಂಡರು. ಅದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಸ್ಪರ್ಧಿಗಳ ವರ್ತನೆ. ಅದರಲ್ಲೂ ಚೈತ್ರಾ ಕುಂದಾಪುರ ಅವರು ಆಡಿದ ಮಾತುಗಳ ಬಗ್ಗೆ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಜಗದೀಶ್ ಅವರಿಗೆ ಚೈತ್ರಾ ಅವರು ಕೆಟ್ಟ ಮಾತುಗಳಲ್ಲಿ ನಿಂದಿಸಿದ್ದರು. ‘ಒಬ್ಬ ಅಪ್ಪನಿಗೆ ಹುಟ್ಟಿದರೆ..’ ಎಂದು ಚೈತ್ರಾ ಕುಂದಾಪುರ ಹೇಳಿದ್ದರು. ಹೆಣ್ಮಕ್ಕಳ ಬಗ್ಗೆ ಗೌರವ ಕೊಡಬೇಕು ಎಂದು ಕೂಗಾಡುವ ಚೈತ್ರಾ ಅವರು ಇಂಥ ವಾಕ್ಯ ಬಳಕೆ ಮಾಡಿದ್ದು ಸರಿಯಲ್ಲ ಎಂದು ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಹಾಗಿದ್ದರೂ ಕೂಡ ಚೈತ್ರಾ ಅವರು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮುಂದುವರಿಸಿದ್ದಾರೆ.