Current Date 15 May, 2026

ವೈದ್ಯರ ಕೋರಿಕೆಗೆ ಕೊನೆಗೂ ಮಣಿದ ದರ್ಶನ್; ಹೆಲ್ತ್ ಬಗ್ಗೆ ಗುಡ್​ನ್ಯೂಸ್

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ನಾಲ್ಕು ತಿಂಗಳುಗಳು ಕಳೆದಿವೆ. ಹೊರ ಬರಲು ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರ ಜಾಮೀನು ಅರ್ಜಿ ಈಗಾಗಲೇ ಕೆಳ ಹಂತದ ಕೋರ್ಟ್​ನಲ್ಲಿ ರಿಜೆಕ್ಟ್ ಆಗಿದೆ. ಈ ಮಧ್ಯೆ ದರ್ಶನ್​ಗೆ ಕೊಂಚ ರಿಲೀಫ್ ಆಗುವಂತಹ ಬೆಳವಣಿಗೆ ನಡೆದಿದೆ.ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್‌ ಎ2 ಆರೋಪಿ ಆಗಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ಅವರಿಗೆ ತೀವ್ರ ಬೆನ್ನು ನೋವು ಉಂಟಾಗಿದೆ. ಅವರಿಗೆ ಎಂಆರ್‌ಐ ಸ್ಕಾನಿಂಗ್​ನ ಅಗತ್ಯವಿದೆ. ಇದನ್ನು ಮಾಡಿಸಲು ವೈದ್ಯರು ಸೂಚಿಸುತ್ತಲೇ ಬಂದಿದ್ದರು. ಆದರೆ, ಇದಕ್ಕೆ ದರ್ಶನ್ ಒಪ್ಪಿರಲಿಲ್ಲ. ಈಗ ಬಳ್ಳಾರಿಯ ವಿಮ್ಸ್‌ನಲ್ಲಿ ಎಂಆರ್‌ಐ ಸ್ಕಾನಿಂಗ್ ಮಾಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ದರ್ಶನ್ ಕೂಡ ಒಪ್ಪಿಗೆ ನೀಡಿದ್ದಾರೆ.