Current Date 15 May, 2026

ಬಘೀರನೇ ರಕ್ಷಕ-ರಾಕ್ಷಸ; ಗಮನ ಸೆಳೆದ ಶ್ರೀಮುರಳಿ ಸಿನಿಮಾದ ಟ್ರೇಲರ್

Bagheera Trailer: ಶ್ರೀಮುರಳಿ ನಾಯಕನಾಗಿ ನಟಿಸಿ, ಹೊಂಬಾಳೆ ಫಿಲಮ್ಸ್​ ಬಂಡವಾಳ ಹೂಡಿದ್ದ ‘ಬಘೀರ’ ಸಿನಿಮಾ ವರ್ಷಗಳಿಂದಲೂ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಶ್ರೀಮುರಳಿಗೆ ಆದ ಗಾಯಗಳು ಇನ್ನಿತರೆ ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬಂದಿತ್ತು. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.ನಟ ಶ್ರೀಮುರಳಿ ಅವರು ಇತ್ತೀಚೆಗೆ ಆ್ಯಕ್ಷನ್ ಹೀರೋ ಎನಿಸಿಕೊಂಡಿದ್ದಾರೆ. ಅವರು ‘ಬಘೀರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ, ಡಾ. ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರೀಮುರಳಿ ಎರಡು ಶೇಡ್​ನ ಕಾಣಿಸಿಕೊಂಡಿದ್ದಾರೆ.