‘ಟಾಕ್ಸಿಕ್’ ಗಾಗಿ ಕೆಲಸ ಮಾಡುತ್ತಿದೆ ಹಾಲಿವುಡ್ನ ಖ್ಯಾತ ಸಂಸ್ಥೆ
Oct 23, 2024 239
Toxic Movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಹಾಲಿವುಡ್ನ ಖ್ಯಾತ ಕಂಪೆನಿಯೊಂದು ವಿಎಫ್ಎಕ್ಸ್ ಕೆಲಸ ಮಾಡಿಕೊಡಲಿದೆ.ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾವನ್ನು ಹಾಲಿವುಡ್ ಗುಣಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ಅವಿರತ ಶ್ರಮಿಸುತ್ತಿದೆ. ಸಿನಿಮಾದಲ್ಲಿ ಕನ್ನಡದ ಕಲಾವಿದರ ಜೊತೆಗೆ ಬೇರೆ ಬೇರೆ ಚಿತ್ರರಂಗದ ಖ್ಯಾತನಾಮ ನಟ-ನಟಿಯರು ಕೆಲಸ ಮಾಡುತ್ತಿದ್ದಾರೆ. ಕೆಲವು ವಿದೇಶಿ ನಟ-ನಟಿಯರು ಸಹ ಸಿನಿಮಾದಲ್ಲಿದ್ದಾರೆ. ಕೆಲವು ಹಾಲಿವುಡ್ ತಂತ್ರಜ್ಞರು ಸಹ ‘ಟಾಕ್ಸಿಕ್’ ಚಿತ್ರತಂಡದಲ್ಲಿದ್ದಾರೆ. ಜೊತೆಗೆ ಕೆಲವು ವಿದೇಶಿ ಸಂಸ್ಥೆಗಳು ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿವೆ.