ಬಿಗ್ ಬಾಸ್ ಮನೆಯಲ್ಲಿ ತುಂಬಾ ಡೇಂಜರಸ್ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್ ಜಗದೀಶ್ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್ ಮಾಡುವವರು ಎಂದು ಹೇಳಿದ್ದಾರೆ.
ಸದ್ಯ ಮೊದಲ ವಾರವೇ ನಟಿ ಹೊರಬಂದಿದ್ದು, ಬಿಗ್ ಮನೆಯ ಆಟಗಾರರ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ. ಅದರಲ್ಲೂ ಆಟವನ್ನು ಇನ್ನೂ ಪ್ರಾರಂಭಿಸದವರು ಮತ್ತು ಪ್ರಾರಂಭಿಸಿದವರ ಬಗ್ಗೆಯೂ ಹೇಳಿದ್ದಾರೆ. ಲಾಯರ್ ಜಗದೀಶ್ ಮೊದಲ ದಿನದಿಂದಲೇ ಆಟ ಶುರು ಮಾಡಿದ್ದಾರೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ನಿರೂಪಣೆಗೆ ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದ ಅನುಭವವನ್ನು ನಟಿ ಯಮುನಾ ಬಿಚ್ಚಿಟ್ಟಿದ್ದಾರೆ.