Current Date 10 Jun, 2026

ಜಗದೀಶ್​ನ ಚಪ್ಪಲಿಗೆ ಹೋಲಿಕೆ ಮಾಡಿದ ಗೋಲ್ಡ್ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರ ವರ್ತನೆ ಮಿತಿ ಮೀರುತ್ತಿದೆ. ಅವರು ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಈ ಮಧ್ಯೆ ಅವರು ಬಿಗ್ ಬಾಸ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಮನೆ ಮಂದಿಗೆ ಬಿಗ್ ಬಾಸ್​ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಕಾರಣಕ್ಕೆ ಯಾರೊಬ್ಬರೂ ಇದನ್ನು ಸಹಿಸಿಲ್ಲ. ಇಡೀ ಮನೆ ಜಗದೀಶ್ ವಿರುದ್ಧ ಒಂದಾಗಿದೆ.

ಜಗದೀಶ್ ಅವರು ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಬೀಪ್ ಹಾಕಿದ್ದಾರೆ. ಮನೆಯಲ್ಲಿ ಯಾರೂ ತಮ್ಮನ್ನು ಗೌರವಿಸುತ್ತಿಲ್ಲ ಅನ್ನೋದು ಅವರ ವಾದ. ಈ ಕಾರಣಕ್ಕೆ ಮತ್ತೆ ಮನೆಯಿಂದ ಹೊರ ಹೋಗುವುದಾಗಿ ಪಣ ತೊಟ್ಟಿದ್ದಾರೆ. ಅವರ ವಿರುದ್ಧ ಇಡೀ ಮನೆ ಒಂದಾಗಿದೆ.