Current Date 09 May, 2026

ಪೊಲೀಸ್ ಕಸ್ಟಡಿಯಲ್ಲಿರೋ ದರ್ಶನ್‌ ಕಷ್ಟದ ಮೇಲೆ ಕಷ್ಟ; ತೂಗುದೀಪ ನಿವಾಸಕ್ಕೂ ಸಂಚಕಾರ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಬೆನ್ನಲ್ಲೇ ಅವರ ಮೇಲೆ ಒಂದೊಂದೇ ಕೇಸ್‌ಗಳು ದಾಖಲಾಗುತ್ತಿವೆ. ಈ ಕಾರಣಕ್ಕೆ ದರ್ಶನ್ ಒಂದರ ಹಿಂದೊಂದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ಚಾರ್ಜ್‌ ಶೀಟ್ ಸಲ್ಲಿಸುವುದಕ್ಕೆ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಮೈಸೂರಿನ ಟಿ.ನರಸಿಪುರದಲ್ಲಿರುವ ತೋಟದ ಮನೆಯಲ್ಲಿ ಅನುಮತಿ ಇಲ್ಲದ ವಿಶೇಷ ಪ್ರಭೇದದ ಬಾತುಕೋಳಿಯನ್ನು ಸಾಕಿದ್ದಕ್ಕೆ ದರ್ಶನ್‌ರನ್ನು ಮೂರನೇ ಆರೋಪಿಯಾಗಿ ಮಾಡಿತ್ತು. ಈ ಸಂಬಂಧ ವಿಚಾರಣೆ ಹಾಜರಾದ ಬೆನ್ನಲ್ಲೇ ಜಾರ್ಜ್‌ಶೀಟ್ ಸಲ್ಲಿಸುವುದಕ್ಕೆ ಅರಣ್ಯ ಇಲಾಖೆ ನಿರ್ಧರಿಸಿತ್ತು.