Current Date 09 May, 2026

ಕುಂದಾಪುರಕ್ಕೆ ಬಂದ 'ಕಲ್ಕಿ'ಯ ಬುಜ್ಜಿ; ಭೈರವನ ವಾಹನ ಓಡಿಸಿ ರಿಷಬ್ ಶೆಟ್ಟಿ ಥ್ರಿಲ್

'ಕಲ್ಕಿ 2898 AD'ಭಾರತೀಯ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ. 600 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾದಲ್ಲಿ ಸ್ಟಾರ್ ಕಾಸ್ಟ್‌ಗಿಂತ ಹೆಚ್ಚು ಕಿಕ್ ಕೊಡುತ್ತಿರುವುದು ಪ್ರಭಾಸ್ ವಾಹನ ಬುಜ್ಜಿ. ಸದ್ಯಕ್ಕೆ ರಿಷಬ್ ಶೆಟ್ಟಿ ಇರುವ ಕುಂದಾಪುರಕ್ಕೆ ಬಂದಿದೆ.

ಬಿಗ್ ಸ್ಟಾರ್ ಕಾಸ್ಟ್ ಇರುವ 'ಕಲ್ಕಿ 2898 AD'ಸಿನಿಮಾಗೆ ತಂಡ ಕೊನೆಯ ಹಂತದ ಪ್ರಚಾರ ಮಾಡುತ್ತಿದೆ. ಇದೇ ಜೂನ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಬುಜ್ಜಿ ದಕ್ಷಿಣ ಭಾರತದ ರಾಜ್ಯಗಳನ್ನು ಸುತ್ತುತ್ತಿದೆ. ಆಂಧ್ರ, ತಮಿಳುನಾಡಿನಲ್ಲೆಲ್ಲ ಸುತ್ತಿದ ಬಳಿಕ ಈಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ. ರಿಷಬ್ ಶೆಟ್ಟಿ ತಂಗಿರುವ ಕುಂದಾಪುರಕ್ಕೆ ಭೇಟಿ ಕೊಟ್ಟಿದೆ.