ಕೆಲವು ಕಾಂಬಿನೇಷನ್‌ಗಳೇ ಹಾಗೆ ಕೇಳಿದ ಕೂಡಲೇನೆ ತಲೆಯೊಳಗೆ ಕೂತು ಬೀಡುತ್ತೆ. ಇಬ್ಬರು ಹೀರೊಗಳು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದೆ ಸಿನಿಪ್ರೇಮಿಗಳಲ್ಲಿ ದೊಡ್ಡದೊಂದು ಕ್ರೇಜ್ ಹುಟ್ಟಿಸುತ್ತೆ. ಕನ್ನಡ ಚಿತ್ರರಂಗದಲ್ಲಿ ಸದ್ಯ ಅಂತಹದ್ದೊಂದು ಕ್ರೇಜ್ ಹುಟ್ಟಾಕುತ್ತಿರೋದು ಗಣೇಶ್ ಹಾಗೂ ರಮೇಶ್ ಅರವಿಂದ್ ಅವರ ಕ್ರೇಜಿ ಕಾಂಬಿನೇಷನ್.
ಇವರೊಬ್ಬರು ಒಂದೇ ಸಿನಿಮಾ ಒಟ್ಟಿಗೆ ನಟಿಸುತ್ತಿದ್ದಾರೆ. ಆ ಸಿನಿಮಾ ಪೋಸ್ಟರ್ ಕೂಡ ಈಗಾಗಲೇ ರಿವೀಲ್ ಆಗಿದೆ. ಒಂದು ಹಳೆ ಪೋಸ್ಟ್ ಕಾರ್ಡ್ ಮೇಲೆ ಕೇವಲ ಇಬ್ಬರ ಫೋಟೊ ಇಟ್ಟಿದ್ದರೆ ಅಷ್ಟೊಂದು ಮಜಾ ಕೊಡುತ್ತಿರಲಿಲ್ಲ. ಆದರೆ, ಈ ಟೈಟಲ್ ಇಲ್ಲದ ಪೋಸ್ಟರ್ ಬೇರೆ ಏನೋ ಹೇಳುವುದಕ್ಕೆ ಹೊರಟಿದೆ. ಇನ್ನೂ ಟೀಮ್ ಬೇರೆ "ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ" ಎಂದು ಹೇಳಿಕೊಂಡಿದೆ.