Current Date 09 May, 2026

"ಆ ಪ್ರಾಜೆಕ್ಟ್‌ನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ": ಬಿಗ್ ಬಾಸ್ ಆನೆ ವಿನಯ್ ಗೌಡ

ಸಿನಿಮಾ ಇಂಡಸ್ಟ್ರಿಯರಲ್ಲೀಗ ದರ್ಶನ್ ಬಗ್ಗೆನೇ ಚರ್ಚೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿ ನಿಂತಿರುವ ದರ್ಶನ್ ಪರಪ್ಪ ಅಗ್ರಹಾರ ಜೈಲು ಸೇರಿದ್ದಾರೆ. ಈ ಕಾರಣಕ್ಕೆ ಅವರನ್ನೇ ನಂಬಿರುವ ನಿರ್ಮಾಪಕರ ಬಗ್ಗೆನೂ ಜೋರಾಗಿಯೇ ಚರ್ಚೆ ಆಗುತ್ತಿದೆ.

ಈ ಮಧ್ಯೆ ದರ್ಶನ್ ನಟಿಸುತ್ತಿರುವ 'ಡೆವಿಲ್' ಸಿನಿಮಾ ಶೂಟಿಂಗ್ ನಿಂತಿದೆ. ಈ ಸಿನಿಮಾದ ಮುಂದಿನ ಭವಿಷ್ಯವೇನು? ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇದೇ ವೇಳೆ ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿರುವ ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ವಿಲನ್ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ವಿನಯ್ ಗೌಡ ಸಂದರ್ಶನ ನೀಡಿದ್ದು, ಡೆವಿಲ್ ಬಗ್ಗೆ ಮಾತಾಡಿದ್ದಾರೆ.